ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನವು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು 2000 ವರ್ಷಗಳಷ್ಟು ಪುರಾತನವೆಂಬ ನಂಬಿಕೆಯಿದೆ. ಒಂದು ದಿಕ್ಕಿನಲ್ಲಿ ತಲಕಾವೇರಿಯ ಬ್ರಹ್ಮಗಿರಿಯೊಂದಿಗೆ ಸ್ಪರ್ಧಿಸುವಷ್ಟು ಎತ್ತರದ ಕೊಳ್ಳಿಕುಮಲೆ. ಇನ್ನೊಂದು ದಿಕ್ಕಿನಲ್ಲಿ ಸಂಪತ್ ಸಮೃದ್ಧ ಪೂಮಲೆ. ಮುಂದೆ-ಹಿಂದೆ ಸುತ್ತಲೂ ಇರುವ ಹಳ್ಳ-ಕೊಳ್ಳ ಕಾಡು ಬೆಟ್ಟಗಳೆಡೆಯಲ್ಲಿ ಕೃಷಿಕ ಸಮುದಾಯದ ಪರಿಶ್ರಮದಿಂದ ತಲೆಯೆತ್ತಿದ ಹಸಿರು ತೋಟಗಳು ಇವೆಲ್ಲವುಗಳ ಜೀವರಸವಾಹಿನಿಯಾಗಿ ಹರಿಯುವ ಪಯಸ್ವಿನಿ ನದಿಯ ತಟದಲ್ಲಿ ಪ್ರಶಾಂತ ವಾತಾವರಣದಲ್ಲಿರುವ ಶ್ರೀ ಶಾಸ್ತಾವು ದೇವಸ್ಥಾನವು ಈ ಊರಿನ ಮತ್ತು ಪರವೂರಿನ ಜನರ ಆಸ್ತಿಕ ಭಾವನೆಗಳನ್ನು ಪ್ರಕಾರಗೊಳಿಸುವ ಕೇಂದ್ರವಾಗಿದೆ .
ಪ್ರಕೃತಿ ರಮಣೀಯವಾದ ನದಿ, ಕಾಡು, ಬೆಟ್ಟ, ಕೊಳ್ಳಗಳಿಂದ ಆವೃತವಾಗಿರುವ ಪೆರಾಜೆ ಗ್ರಾಮವು ಪೂಮಲೆ ಮತ್ತು ಕೊಳ್ಳಿಕುಮಲೆ ಬೆಟ್ಟಗಳ ಮಡಿಲಲ್ಲಿದ್ದು, ಆಡಳಿತ ದೃಷ್ಟಿಯಿಂದ ಮಾತ್ರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿಗೆ ಸೇರಿದ ಗ್ರಾಮವಾಗಿದೆ. ಭೌಗೋಳಿಕವಾಗಿ ಸುಳ್ಯ ತಾಲೂಕಿನ ಆಲೆಟ್ಟಿ ಮತ್ತು ಅರಂತೋಡು – ತೊಡಿಕಾನ ಗ್ರಾಮಗಳ ನಡುವೆ ಪೆರಾಜೆ ಗ್ರಾಮವು ಇರುವುದರಿಂದ ಸಹಜವಾಗಿ ಇಲ್ಲಿನ ಜನರ ಸಾಮಾಜಿಕ ಸಂಬಂಧಗಳು, ಆರ್ಥಿಕ ವ್ಯವಹಾರಗಳು ಹತ್ತಿರದ ದಕ್ಷಿಣ ಕನ್ನಡದ ಗ್ರಾಮದವರೊಂದಿಗೆ ಬೆಸೆದಿದೆ. ಇದಲ್ಲದೆ ಕೊಡಗು, ದಕ್ಷಿಣ ಕನ್ನಡ, ಕೇರಳ ರಾಜ್ಯದ ಮಿಶ್ರ ಸಂಸ್ಕೃತಿಯನ್ನು ಕಾಣಬಹುದು. ಈ ಸಂಸ್ಕೃತಿಯನ್ನು ಮುಖ್ಯವಾಗಿ ದೇವಸ್ಥಾನದ ಆಡಳಿತ ವ್ಯವಸ್ಥೆ, ಜಾತ್ರೋತ್ಸವ ಮತ್ತು ಭೂತಾರಾಧನೆಯಲ್ಲಿ ಕಾಣುತ್ತೇವೆ.